ಬಾಲಿವುಡ್

16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾದ ಅಮಿರ್ ಖಾನ್

Manjula VN
ಮುಂಬೈ: ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ದೂರವಿರುತ್ತಿದ್ದ ಬಾಲಿವುಡ್ ನಟ ಅಮಿರ್ ಖಾನ್ ಅವರು, 16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ. 
ಸಂಗೀತ ಲೋಕದ ಜೀವಂತ ದಂತಕಥೆ ಲತಾ ಮಂಗೇಷ್ಕರ್ ಅವರ ತಂದೆ ದಿನನಾಥ್ ಮಂಗೇಷ್ಕರ್ ಅವರ 75ನೇ ವರ್ಷದ ಪುಣ್ಯ ತಿಥಿ ಪ್ರಯುಕ್ತ ಮಾಸ್ಟರ್ ದಿನನಾಥ್ ಮಂಗೇಷ್ಕರ್ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡಲಾಗುತ್ತದೆ. ಲತಾ ಮಂಗೇಷ್ಕರ್ ಅವರು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಲು ಆರಂಭಿಸಿದ್ದಾಗಿನಿಂದಲೂ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 
ಈ ವರ್ಷ ಕೂಡ ದೀನನಾಥ್ ಮಂಗೇಷ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನೈಟಿಂಗಲೆ ಆಫ್ ಇಂಡಿಯಾ ನಟ ಅಮಿರ್ ಖಾನ್ ಅವರನ್ನು ಆಹ್ವಾನಿಸಿತ್ತು. 
ದಂಗಲ್ ಚಿತ್ರದಲ್ಲಿ ಅತ್ಯುತ್ತಮವಾಗಿ ನಟನೆ ಹೀನ್ನಲೆಯಲ್ಲಿ ಅಮಿರ್ ಖಾನ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ಅಹ್ವಾನ ನೀಡಲಾಗಿತ್ತು. ಕಳೆದ 16 ವರ್ಷಗಳಿಂದಲೂ ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳದೆ, ಪ್ರಶಸ್ತಿಗಳನ್ನು ನಿರಾಕರಿಸುತ್ತಿದ್ದ ಅಮಿರ್ ಖಾನ್ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಪ್ರಶಸ್ತಿಯನ್ನು ಸ್ವೀಕರಿಸಿದ್ದ ಎಲ್ಲರಲ್ಲೂ ಆಶ್ಚರ್ಯವನ್ನು ಮೂಡಿಸಿತ್ತು. 
SCROLL FOR NEXT